‘ಪಾತರಗಿತ್ತಿ’ ಮೇ ಬಿಡುಗಡೆ

  • IndiaGlitz, [Tuesday,March 25 2014]

‘ಪಾತರಗಿತ್ತಿ’ ಕನ್ನಡ ಸಿನೆಮಾ ಚಿತ್ರೀಕರಣ ಮುಗಿಸಿ ರೆರೆಕಾರ್ಡಿಂಗ್, ಎಫ್ಫೆಕ್ಟ್ಸ್, ಡಿ ಐ ತಂತ್ರಜ್ಞಾನದ ಕೌಶಲ್ಯವನ್ನು ಅಳವಡಿಸಿಕೊಂಡು ಏಪ್ರಿಲ್ 15ರಂದು ಧ್ವನಿ ಸುರುಳಿ ಬಿಡುಗಡೆ ನಂತರ ಮೇ ತಿಂಗಳ ಮೊದಲ ವಾರದಲ್ಲಿ ಚಿತ್ರ ಬಿಡುಗಡೆ ಲೆಕ್ಕಾಚಾರವನ್ನು ಮಾಡಿಕೊಳ್ಳುತ್ತಿದೆ.

‘ಪಾತರಗಿತ್ತಿ’ ಸಿನೆಮಾಕ್ಕೆ 37 ದಿ ವಸಗ ಚಿತ್ರೀಕರಣ ಮಾಡಲಾಗಿದೆ. ಸಿನಿ ಸ್ಟಾಲ್ ಅವರ ಪ್ರಥಮ ಕಾಣಿಕೆ ಕೆ ಈಶ್ವರಪ್ಪ ಅವರು (ನಿರ್ದೇಶಕ ಕೆ ಈಶ್ವರ್) ನಿರ್ಮಾಪಕರು. ಮಂಜುನಾಥ್ ಈ ಚಿತ್ರದ ಸಹ ನಿರ್ಮಾಪಕರು. ಪಾತರಗಿತ್ತಿ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಕೆ ಈಶ್ವರ್ ಅವರದು.

‘ಪಾತರಗಿತ್ತಿ’ ಚಿತ್ರಕ್ಕೆ ಸಂಗೀತವನ್ನು ವೆಂಕಟಸ್ವಾಮಿ ಅವರು ಬಹುತೇಕ ಪೂರೈಸಿ ಅಸುನೀಗಿದರು, ಅವರ ಕೆಲಸವನ್ನು ಸಮೀರ ಕುಲಕರ್ಣಿ ಅವರು ಪೂರ್ತಿಗೊಳಿಸಿದ್ದಾರೆ.

ರಾಕೇಶ್ ಸಿ ತಿಲಕ್ ಈ ಚಿತ್ರದ ಛಾಯಾಗ್ರಾಹಕರು. ನಾಯಕನಾಗಿ ಶ್ರೀಕಿ, ನಾಯಕಿ ಆಗಿ ಪ್ರಜ್ಜು ಪೂವಯ್ಯ ಇದ್ದಾರೆ. ತಬಲಾ ನಾಣಿ, ಲಕ್ಕಿ ಶಂಕರ್, ರಾಜು ತಾಳಿಕೋಟೆ, ಲಯೆನ್ದ್ರ, ಮಿತ್ರ, ಬು ಲ್ಲೆಟ್ ಪ್ರಕಾಷ್, ಪೊತ್ರೆ ನಾಗರಾಜ್, ಬ್ರಹ್ಮವರ್, ಶಾಂತಮ್ಮ, ಚ ಿಕ್ಕಣ್ಣ, ಕುರಿ ಪ್ರತಾಪ್, ರಾಮನಯಕ್, ನೀಲಕಂತಸ್ವಾಮಿ ಪೋಷಕ ಪಾತ್ರಗಳಲ್ಲಿ ಇದ್ದಾರೆ. ಶಕೀಲಾ ಒಂದು ಹಾಡಿಗೆ ಬಂದು ಕುಣಿದು ಕುಪ್ಪಳಿಸಿದ್ದಾರೆ.

ಗಣೇಶ್ ಎಂ ಅವರ ಸಂಕಲನ, ಮದನ್ ಹರಿಣಿ, ಸದಾ ರಾಘವ್, ಮಾಲೂರ್ ಶ್ರೀನಿವಾಸ್ ಅವರ ನೃತ್ಯ ನಿರ್ದೇಶನ, ಮಾಸ್ ಮಾಧ ಅವರ ಸಾಹಸ, ಕೆ ವಿ ರಾವ್ ಅವರ ಕಲೆ ಈ ಚಿತ್ರಕ್ಕಿದೆ.